ಕಾಲೇಜಿನ ಕುರಿತು:

ವಿದ್ಯಾವರ್ಧಕ ಸಂಘ (ರಿ), ಶಿರ್ವದಿಂದ ಪ್ರಾಯೋಜಿಸಲ್ಪಟ್ಟಿರುವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು, ಶಿರ್ವ, ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿರುತ್ತದೆ. ಉಡುಪಿ ಜಿಲ್ಲೆಯ ಶಿರ್ವ ಗ್ರಾಮದ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ 1980ರಲ್ಲಿ ಸ್ಥಾಪಿಸಲ್ಪಟ್ಟಿತು.

ದೇಶದ ಬೆನ್ನೆಲುಬಾಗಿರುವ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಧ್ಯೇಯೋದ್ದೇಶದಿಂದ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲಾಯಿತು. ದೇಶದ ಉನ್ನತಿಗೆ ಶಿಕ್ಷಣವೊಂದೇ ದಾರಿ ಎನ್ನುವ ಗುರಿಯೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಯನ್ನು “ವಿದ್ಯಾವರ್ಧಕ ಸಂಘ” ಎಂದು ನಾಮಕರಣ ಮಾಡಲಾಯಿತು. ಪರಿಸರಕ್ಕೆ ಸೇವೆ ಒದಗಿಸುವುದರೊಂದಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಈ ಸಂಸ್ಥೆಯ ಸಂಸ್ಥಾಪಕರ ಆಶಯವಾಗಿತ್ತು.

ಕಾಲೇಜಿನ ನೂತನ ಕಟ್ಟಡವು ಮಾರ್ಚ್ 1990ರಲ್ಲಿ ಶ್ರೀ ವಿಭುದೇಶತೀರ್ಥ ಸ್ವಾಮೀಜಿ, ಅದಮಾರು ಮಠ, ಉಡುಪಿ ಇವರಿಂದ ಉದ್ಘಾಟಿಸಲ್ಪಟ್ಟಿತು. ಅಂದಿನ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ. ಅಮರನಾಥ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.

ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದಿಂದ ಖಾಯಂ ಮಾನ್ಯತೆಯನ್ನು ಹೊಂದಿದ್ದು, ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದಿಂದ 2(ಎಫ್) ಮತ್ತು 12(ಬಿ) ಮಾನ್ಯತೆಯನ್ನು ಕೂಡ ಹೊಂದಿದೆ.

ನ್ಯಾಕ್ ಸಂಸ್ಥೆಯಿಂದ ಮೊದಲ ಸುತ್ತಿನಲ್ಲಿ 2004ರಲ್ಲಿ “ಬಿ” ಗ್ರೇಡ್ ಪಡೆದಿದ್ದು, 2010ರಲ್ಲಿ ದ್ವಿತೀಯ ಸುತ್ತಿನ ಮೌಲ್ಯಾಂಕದಲ್ಲಿಯೂ “ಬಿ” ಗ್ರೇಡ್(2.33 ಅಂಕಗಳೊಂದಿಗೆ) ಪಡೆಯಲಾಗಿತ್ತು. 2017ರ ಜನವರಿಯಲ್ಲಿ ನಡೆದ ಮೂರನೇ ಸುತ್ತಿನಲ್ಲಿ “ಬಿ++” ಗ್ರೇಡ್(2.77 ಅಂಕಗಳೊಂದಿಗೆ) ನ್ಯಾಕ್‍ನಿಂದ ಮಾನ್ಯತೆ ಸಿಕ್ಕಿರುವುದು ಸಂಸ್ಥೆಯ ಹೆಗ್ಗಳಿಕೆ.

ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಒಳಾಂಗಣ ಕ್ರೀಡಾ ಸೌಕರ್ಯಗಳನ್ನು ಹೊಂದಿರುವ “ಕ್ರೀಡಾ ಭವನ”ವನ್ನು ನಿರ್ಮಿಸಲಾಗಿದೆ.

ಕಾಲೇಜು ಶಾಂತಿಯುತ ಹಾಗೂ ಹಸಿರು ಹೊದಿಕೆಯ ವಾತಾವರಣ ಹೊಂದಿದ್ದು, ಒಟ್ಟು ಸುಮಾರು 15 ಎಕರೆಯಷ್ಟು ವಿಸ್ತಾರವಾದ ಸಂಕೀರ್ಣ ಹೊಂದಿದ್ದು, ವಿದ್ಯಾರ್ಜನೆಗೆ ಅತೀ ಪ್ರಸಕ್ತ ಸ್ಥಳವಾಗಿರುತ್ತದೆ.

ಸುಮಾರು 38 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಈ ಸಂಸ್ಥೆಯು 2004-05ರಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಸಡಗರದಿಂದ ಆಚರಿಸಿತ್ತು.

ಕಾಲೇಜಿನ ಕೆಲಸದ ಸಮಯ:

ಕಾಲೇಜಿನ ದೈನಂದಿನ ಕೆಲಸ ದಿನಕ್ಕೆ 7.00 ಗಂಟೆ

ಪೂರ್ವಾಹ್ನ

9-00am

ರಿಂದ

12-50pm.

ಊಟದ ಸಮಯ

12-50pm

ರಿಂದ

1-30pm

ಅಪರಾಹ್ನ

1-30pm

ರಿಂದ

5-00pm.